Friday, June 26, 2020

ಇತ್ತೆ ಏತಕ್ಕೆ ಈ ನರಜನ್ಮವ..?

ಪ್ರಪಂಚದಲ್ಲಿ ಬುದ್ಧಿಶಕ್ತಿ ಹೊಂದಿರುವ ಏಕೈಕ ಪ್ರಾಣಿ ಮನುಷ್ಯ ಎಂಬ ಹಿರಿಮೆಯನ್ನು ಉಳಿಸಿಕೊಳ್ಳುವ ಪ್ರಯತ್ನ ಮಾನವರಾಗಿ ನಾವು ಮಾಡುತ್ತಲಿದೆವಾ ಎಂಬ ಪ್ರಶ್ನೆ ಪದೆ ಪದೆ ಕಾಡಲಾರಂಭಿಸುವುದು ಸಹಜ.

ಏಕೆಂದರೆ ಸುಂದರವಾದ ಬದುಕನ್ನು ನಾವು ನಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡು ಮನುಷ್ಯ ಮನುಷ್ಯನಿಗೆ ಅಘಾತ ತರುವಂತಹದ ನಿಟ್ಟಿನಲ್ಲಿ ನಮ್ಮ ಜೀವನ ಸಾಗುತ್ತಿರುವುದು ದುರಂತವೇ ಸರಿ.
ನಾನು, ನನ್ನದು, ನನ್ನಿಂದಲೇ ಎಂಬ ಅಜ್ಞಾನ, ಅವಿವೇಕ ಮತ್ತು ಅಹಂಕಾರದಿಂದ ನಶಿಸಿ ಹೋಗುವ ಈ ದೇಹಕ್ಕಾಗಿ, ಅಳಿಯುವ ಈ ಅಧಿಕಾರಕ್ಕಾಗಿ ನಾವು ಪ್ರಯತ್ನಿಸುತ್ತಿರುವುದು ವ್ಯರ್ಥವಾಗಿ ಕಾಣುವುದಿಲ್ಲವೇ? ಬದುಕಿನ ಮೂಲ ಆಶಯದೊಂದಿಗೆ ನಾವೆಲ್ಲರೂ ಒಂದು ಎಂಬ ಭಾವದಿಂದ ಬಾಳಿದಾಗ ಮಾತ್ರ ಅದಕ್ಕೆ ಒಂದು ಅರ್ಥ. ಹಲವು ಆಸೆ ಆಮಿಷಗಳಿಟ್ಟುಕೊಂಡು ಬದುಕುವ ಬದಲು ಕೆಲವು ಕನಸುಗಳಿಟ್ಟುಕೊಂಡು ಸಮರ್ಪಣಾ ಭಾವದಿಂದ ಜೀವನ ಸಾಗಿಸುವುದು ಅತ್ಯುತ್ತಮ.

ಪ್ರಕೃತಿ ವಿಸ್ಮಯದ ಭಾಗವಾಗಿ ಕಾಣುವ ಪ್ರಾಣಿ ಪಕ್ಷಿಗಳು, ಗಿಡ ಮರಗಳು ನಮಗಿಂತ ಶ್ರೇಷ್ಠತೆಯ ಜೀವನ ಜೀವಿಸುವುದು ಕಂಡರೆ ಅದೆನೋ ಖುಷಿ. ಆದರೆ ಅದು ನಮ್ಮ ಜೀವನಕ್ಕೆ ಅಳವಡಿಸಿಕೊಳ್ಳುವ ವಿಚಾರಕ್ಕೆ ಬಂದಾಗ ಮಾತ್ರ ನಮ್ಮದು ಶೂನ್ಯ ಸಾಧನೆ.

ಮುಂಗುಸಿಯ ಪ್ರತಿ ಗಂಗಮ್ಮ ತೋರಿರುವ ಪ್ರೀತಿ, ವಾತ್ಸಲ್ಯದ ಪ್ರತೀಕವಾಗಿ ಹಾವಿನೊಂದಿಗೆ ಗುದ್ದಾಡಿ ಮಗುವನ್ನು ಬದುಕಿಸಿರುವ ಕಥೆ ನಿಮಗೆಲ್ಲರಿಗೂ ತಿಳಿದುದ್ದೆ. ಆದರೆ ಬುದ್ದಿ ಹೊಂದಿರುವ ಗಂಗಮ್ಮ ಮಾಡಿರುವುದೇನು? ತಾಳ್ಮೆ ಕಳೆದುಕೊಂಡು ಮಗುವಿನಂತೆ ಪ್ರೀತಿ ತೋರುವ ಮುಂಗುಸಿಯ ವಧೆ.. ಕಥೆ ಕಾಲ್ಪನಿಕವಾದರೂ ಇದರಲ್ಲಿ ಅಡಗಿರುವ ಸಂದೇಶ ಪ್ರತಿಯೊರ್ವರಿಗೂ ಮರೆಯಲಾಗದ ಪಾಠ.

ಅದಾಗ್ಯೂ ನಮ್ಮ ಸುತ್ತಮುತ್ತಲಿನ ಜನರ ಜೀವನ, ಭಾವನೆ, ಗೌರವಕ್ಕೆ ಬೆಲೆ ಕೊಡದೆ ನಮ್ಮತನ ಪ್ರದರ್ಶಿಸುತ್ತಿರುವುದು ಯಾವ ಪುರುಷಾರ್ಥಕ್ಕೆ ಎಂಬುದು ಆಲೋಚಿಸುವ ಅಗತ್ಯವಿದೆ. ಮನುಷ್ಯನಿಗೆ ಪ್ರಕೃತಿ ನೀಡಿರುವ ವಿಶೇಷ ಶಕ್ತಿಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ನಾವು ಕೊನೆಯಲ್ಲಿ ಪ್ರಶ್ನಿಸಿಕೊಳ್ಳಬೇಕಿರುವುದು ಒಂದನ್ನೇ..

ಪ್ರಾಣಿ ಪಕ್ಷಿ, ಗಿಡ ಮರಗಳಿಗಿಂತ ಹೀನವಾಗಿ ಬದುಕುವ ನಮ್ಮ ಪರಿ ನಮಗೆ ಅಸಹ್ಯ ಮೂಡಿಸುವಂತಹದು. ಮನುಷ್ಯನಾಗಿ ಮಾನವೀಯತೆಯನ್ನು ಬದಿಗಿರಿಸಿ ಬದುಕುವ ನಾವುಗಳು ಯೋಚಿಸಬೇಕಿರುವುದು..

ದಾಸ ಸಾಹಿತ್ಯದ ಅನರ್ಘ್ಯ ರತ್ನ ಅಂಬಾಬಾಯಿ ರವರು ಹೇಳಿರುವ ಮಾತು "ತ್ತೆ ಏತಕ್ಕೆ ಈ ನರಜನ್ಮವ?"

- ಬಿಎಂ ಅಮರವಾಡಿ

4 comments:

Thank you for Visiting.

ಅಂಧಂತಮಸು ಇನ್ನಾರಿಗೆ : ಕನಕದಾಸರ ಕೀರ್ತನೆ ವಿಶ್ಲೇಷಣೆ

  ಅಂಧಂತಮಸು ಇನ್ನಾರಿಗೆ ಅಂಧಂತಮಸು ಇನ್ನಾರಿಗೆ ಗೋ - ವಿಂದನ ನಿಂದಿಸುವರಿಗೆ ಸಂದೇಹವಿಲ್ಲದೆ ಸಾರಿಸಾರಿಗೆ ವಾಯುನಂದನನ ವಂದಿಸದವರಿಗೆ ಮಾತುಮಾತಿಗೆ ಹರಿಯ ನ...