Monday, January 27, 2020

ಸಂವಿಧಾನ ನಮಗೆಷ್ಟು ಹತ್ತಿರ..?



ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲಿ ಎರಡು ರೀತಿಯ ಸ್ವಾತಂತ್ರ್ಯಗಳು ನಮಗೆ ಕಾಣಸಿಗುತ್ತವೆ. ಒಂದು ಗಣರಾಜ್ಯೋತ್ಸವದ ಮೊದಲು ಇನ್ನೊಂದು ಗಣರಾಜ್ಯೋತ್ಸವದ ನಂತರ. ಹೌದು ಇತಿಹಾಸದ ಪುಟಗಳಿಂದ ಜನರ ಜೀವನವನ್ನು ಹೆಕ್ಕಿ ತೆಗೆದಾಗ ನಮ್ಮ ಕಣೆದುರಿಗೆ ಬಂದು ನಿಲ್ಲುವ ಸ್ವಾತಂತ್ರ್ಯದ ಕರಾಳ ಮುಖ ನಿಜಕ್ಕೂ ತಲೆ ತಗ್ಗಿಸುವಂತಹುದು ಎಂದರೆ ತಪ್ಪಾಗದು.

ಇದರ ಪರಿಣಾಮವಾಗಿಯೇ ಸಂವಿಧಾನ ಜಾರಿಗೆ ಬಂದಿರುವ ದಿನವಾದ ಗಣರಾಜ್ಯೋತ್ಸವ ಶೋಷಿತರ, ಬಡವರ, ದಮನೀತರ, ದಿನ ದಲಿತರ ಬದುಕಿನಲ್ಲಿ ಒಂದು ಆಶಾಕಿರಣವಾಗಿ ಗೋಚರಿಸುತ್ತದೆ. ಸಂವಿಧಾನವು  ಕೆಳವರ್ಗದ ಜನರಲ್ಲಿ ಆತ್ಮವಿಶ್ವಾಸ ಮೂಡಿಸಿ ಬದುಕುವ ಹೊಸ ಭರವಸೆಯನ್ನು ಕಲ್ಪಿಸಿಕೊಟ್ಟರೆ, ಸದಾ ಜಾತಿ ಮತ್ತು ಧರ್ಮದ ದೃಷ್ಟಿಯಿಂದ ನೋಡುವ ಹಳದಿ ಕಣ್ಣುಗಳಿಗೂ ಕೂಡ ಪಾಠ ಕಲಿಸಿರುವುದು ಅಲ್ಲಗಳೆಯುವಂತಿಲ್ಲ.

ಬದುಕಿನ ಪ್ರತಿ ಹೆಜ್ಜೆಗೂ ನಾವು ನಡೆದುಕೊಳ್ಳುವ ಪರಿಯನ್ನು ಮತ್ತು ತಪ್ಪಿದಲ್ಲಿ ಅದಕ್ಕೆ ಶಿಕ್ಷೆಯನ್ನು ನೀಡುವ ಮೂಲಕ ಮನುಷ್ಯತ್ವವನ್ನು ಜೀವಂತವಾಗಿಡುವ ಪ್ರಯತ್ನ ನಮ್ಮ ಸಂವಿಧಾನ ಮಾಡುತ್ತದೆ. ಧರ್ಮವೆಂಬ ಪದದ ತಪ್ಪು ಕಲ್ಪನೆಯಿಂದ ಸೃಷ್ಟಿಯಾದ, ಸೃಷ್ಟಿಯಾಗುತ್ತಲಿರುವ ಇಂದಿನ ಆಚರಣೆಯ ಧರ್ಮಗಳು ಮಾನವೀಯತೆಯನ್ನು ಮರೆತಂತಿದೆ.

ಜೀವರಾಶಿಗಳ ಲೇಸನ್ನೆ ಬಯಸಿರುವ ಮಹಾತ್ಮರ ತತ್ವಗಳಲ್ಲಿ ಭಿನ್ನತೆ ಹುಡುಕಿಕೊಂಡು ಅದನ್ನು ಒಂದು ಕೋಮಿನವರ ಸ್ವತ್ತಾಗಿಸಿಕೊಳ್ಳುತ್ತಿರುವ ಶ್ರೇಷ್ಠ ಚಿಂತಕರ ವಿಚಾರಗಳು, ಮೌಲಿಕ ಸಂದೇಶಗಳು ಮುಂದಿನ ಪೀಳಿಗೆಗೆ ಕಲಿಸಿಕೊಡುವುದರ ಬದಲು ಸಂಸ್ಕಾರ, ಸಂಸ್ಕೃತಿ ಹೆಸರಿನಡಿ ಅಮಾನುಷವಾಗಿ ಗುಂಡಿ ತೋಡುತ್ತಿರುವುದು ವಿಚಿತ್ರ.

ಪ್ರಪಂಚದ ಬೇರಾವ ದೇಶದಲ್ಲಿರದ ಜಾತಿ, ಮತ ಪಂಥಗಳು, ಸಂಸ್ಕೃತಿ, ವಿಭಿನ್ನ ಆಚರಣೆಗಳು ನಮ್ಮಲ್ಲಿದ್ದರು ಕೂಡ, ಮನುಜಮತಕ್ಕೆ ಧಕ್ಕೆಯಾಗದಂತಹ ನಿಯಮಗಳು ರೂಪಿಸಿ ನಮಗೆ ನೀಡಿರುವ  ಸಂವಿಧಾನವೆಂಬ ತತ್ವಕ್ಕೆ ನಾವು ಎಷ್ಟು ಹತ್ತಿರವಾಗುತ್ತಿದ್ದೆವೆ ಎಂಬುದನ್ನು ಆಲೋಚಿಸಬೇಕಿದೆ. ಸ್ವ ಅವಲೋಕನ ಸಂತಸದ ಜೀವನಕ್ಕೆ ಅಡಿಪಾಯವೆಂಬಂತೆ ಭವಿಷ್ಯದ ದೃಷ್ಟಿಯಿಂದ ನಾವು ಸಂವಿಧಾನವನ್ನು ಅಪ್ಪಿಕೊಳ್ಳಬೇಕಿದೆ. ಒಪ್ಪಿಕೊಳ್ಳಬೇಕಿದೆ. ಇಂತಹ ಅದ್ಭುತ ಸಂವಿಧಾನವನ್ನು ನಮಗೆ ಕಾಣಿಕೆಯಾಗಿ ನೀಡಿದ ಡಾ. ಬಿ.ಆರ್ ಅಂಬೇಡ್ಕರ್ ಅವರ ಜೀವನವೇ ನಮಗೆ ಪ್ರೇರಣೆ ಮತ್ತು ಸ್ಫೂರ್ತಿ ಎಂದೆನ್ನುತ ಭವ್ಯ ಭಾರತವನ್ನು ಕಟ್ಟೋಣ.. 

-ಬಿ.ಎಂ ಅಮರವಾಡಿ, ಬೀದರ್

No comments:

Post a Comment

Thank you for Visiting.

ಅಂಧಂತಮಸು ಇನ್ನಾರಿಗೆ : ಕನಕದಾಸರ ಕೀರ್ತನೆ ವಿಶ್ಲೇಷಣೆ

  ಅಂಧಂತಮಸು ಇನ್ನಾರಿಗೆ ಅಂಧಂತಮಸು ಇನ್ನಾರಿಗೆ ಗೋ - ವಿಂದನ ನಿಂದಿಸುವರಿಗೆ ಸಂದೇಹವಿಲ್ಲದೆ ಸಾರಿಸಾರಿಗೆ ವಾಯುನಂದನನ ವಂದಿಸದವರಿಗೆ ಮಾತುಮಾತಿಗೆ ಹರಿಯ ನ...